🙏ಓಂ ಜೈ ಮಾತಾ ಓಂ ಜೈ ಗುರುದೇವ🙏
🌸ಕಶ್ಯಪ ಸೂತ್ರಗಳು🌸
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏
🌸ಕಶ್ಯಪ ಸೂತ್ರ – 3🌸
🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹
ಆಸೆಗಳಿಂದ ಬಂಧಿತವಾದ, ಕರ್ಮಗಳಿಂದ ಬಂಧಿತವಾದ ಆತ್ಮಕ್ಕೆ ಇವುಗಳಿಂದ ಬಿಡುಗಡೆ ನೀಡುವ ದೇವತಾಧರ್ಮದ ಋಣ, ಪಿತೃಋಣಗಳನ್ನು ತೀರಿಸಿಕೊಂಡ ನಾವು ಮೂರನೆಯದಾಗಿ ಮಾಡಬೇಕಾದದ್ದು –
🌟 ಒಬ್ಬ ಗುರುವನ್ನು ಅನುಸರಿಸುವಂತಹದ್ದು. 🌟 ಕಲಿಯುಗದಲ್ಲಿ ಭಗವಂತ ಪ್ರತ್ಯಕ್ಷವಾಗಿ ಬರುವುದಿಲ್ಲ. ನಮಗೆ ಭಗವಂತ ದರುಶನ ಕೊಡುವುದು ಗುರುವಿನ ರೂಪದಲ್ಲೇ. ಗುರುವಿನ ಹಿತವಚನಗಳನ್ನು ನಾವು ಕೇಳುತ್ತಾ, ಅವುಗಳನ್ನು ಮನನ ಮಾಡಿಕೊಂಡು ನಮ್ಮ ಜೀವನದಲ್ಲಿ ನಾವು ಅವುಗಳನ್ನು ಆಚರಣೆಗೆ ತರಬೇಕು.
‘ಆಚಾರ್ಯದೇವೋಭವ’ ಎಂಬುದಾಗಿ ಉಪನಿಷತ್ತುಗಳೇ ಸಾರಿವೆ. ನಾವು ವೇದ, ಉಪನಿಷತ್ತು, ಪುರಾಣ, ಭಗವದ್ಗೀತೆಗಳನ್ನು ಆಚಾರ್ಯರ ಮೂಲಕ ಕೇಳಿ ಅರಿತುಕೊಳ್ಳಬೇಕು. ಇಂತಹ ಗುರುವಿನ ನಿಂದನೆಯನ್ನು ನಾವು ಎಂದೂ ಮಾಡಬಾರದು. ಇದರಿಂದ ಜೇವನದಲ್ಲಿ ಶ್ರೇಯಸ್ಸು, ಶಾಂತಿ, ನೆಮ್ಮದಿಗಳು ಖಂಡಿತ ದೊರಕುವುದಿಲ್ಲ. ನಮ್ಮಲ್ಲಿ ಅರಿವು, ಪರಿಜ್ಞಾನಗಳಿರುವುದಿಲ್ಲ. ಆದರೆ ಗುರುವಿಗೆ ಶ್ರದ್ಧಾ, ಭಕ್ತಿಯಿಂದ ಸೇವೆ ಮಾಡಿದಾಗ ಅವರ ಅನುಗ್ರಹದಿಂದ ನಮ್ಮಲ್ಲಿ ಸಹನೆ, ತಾಳ್ಮೆ, ಸಹಿಷ್ಣುತೆ ಬೆಳೆದು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ.
🌟 ಬಾಹ್ಯದ ಗುರು ನಮ್ಮ ಆಂತರ್ಯದ ಗುರುವನ್ನು ತೋರಿಸಿ ಕೊಡುತ್ತಾರೆ.🌟 ಆಧ್ಯಾತ್ಮಿಕ ಸಾಧನೆಯಲ್ಲಿ ನಮಗೆ ಗುರು ಕೃಪೆ ಬಹು ಮುಖ್ಯ.
🌟ದೇವತಾರಾಧನೆಯಿಂದ ಬುದ್ಧಿಯು ತರ್ಕರಹಿತವಾಗುತ್ತದೆ. ಪಿತೃ ಆರಾಧನೆಯಿಂದ ಮನಸ್ಸು ಚಿಂತಾರಹಿತವಾಗುತ್ತದೆ. ಆದರೆ ಗುರುವು ನಮ್ಮ ಆತ್ಮವನ್ನು ಪರಮಾತ್ಮನೊಡನೆ ಸೇರಿಸುತ್ತಾರೆ.🌟
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies