🙏ಓಂ ಜೈ ಮಾತಾ ಓಂ ಜೈ ಗುರುದೇವ🙏
🌸ಕಶ್ಯಪ ಸೂತ್ರಗಳು🌸
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏
🌸ಕಶ್ಯಪ ಸೂತ್ರ – 3🌸
🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹
ಗುರುಗಳ ಮಾರ್ಗದರ್ಶನವಿಲ್ಲದೆ ಸಾಧಾರಣ ಮಾನವರಾಗಿರುವ ನಮ್ಮೆಲ್ಲರ ಆಲೋಚನೆಗಳು ಒಂದೇ ರೀತಿಯಾಗಿರುತ್ತದೆ. ನಮಗೆಲ್ಲರಿಗೂ ದೇಹದ ಅಂತ್ಯವಾಗುವ ಮೃತ್ಯುವಿನ ಭಯ ಸದಾ ಇರುತ್ತದೆ. ಕೊನೆಗೂ ಒಂದು ದಿನ ಮೃತ್ಯು ನಮ್ಮನ್ನು ಕಬಳಿಸುತ್ತದೆ ಎಂಬ ಭಯದಿಂದ ನಮ್ಮ ಹಕ್ಕುಗಳನ್ನು, ನಾವು ಜೀವಮಾನವಿಡೀ ಗಳಿಸಿದ ವಸ್ತುಗಳ ಮೇಲೆ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಇದಕ್ಕೆಂದೇ ನಮ್ಮ ಗಳಿಕೆಯ ವಾರಸುದಾರರಿಗಾಗಿ ವಂಶಾಭಿವೃದ್ಧಿ ಮಾಡುತ್ತೇವೆ. ನಮ್ಮ ಪೀಳಿಗೆ ಸುಖವಾಗಿರಲೆಂದು ಗಳಿಸಿದ್ದನ್ನು ಬೆಳೆಸುತ್ತೇವೆ, ವೃದ್ಧಿಗೊಳಿಸುತ್ತೇವೆ. ನಮ್ಮ ದೇಹ ಅಂತ್ಯಗೊಂಡರೂ ನಮ್ಮ ಹೆಸರು ಉಳಿಯಬೇಕೆಂದು ಕೀರ್ತಿ ಗಳಿಸುತ್ತೇವೆ. ಆದರೆ ಇದೆಲ್ಲಾ ನಶ್ವರ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಕೀರ್ತಿ ಸ್ಥಾಪನೆ ಮುಖ್ಯವಲ್ಲ, ಧರ್ಮ ಸ್ಥಾಪನೆ ಮುಖ್ಯ ಎಂಬುದು ನಮಗೆ ತಿಳಿಯುವುದಿಲ್ಲ. ಇದನ್ನು ತಿಳಿದರೆ ನಮ್ಮ ಜನ್ಮವೇ ಶ್ರೇಷ್ಠವಾಗುವುದು. ಭಾವೀ ಜನಾಂಗವಾದ ಇಂದಿನ ಮಕ್ಕಳಿಗೆ ಈಗಿನಿಂದಲೇ ಈ ಅರಿವು ಮೂಡಿಸಿ ಕೊಡುವುದು ಬಹಳ ಮುಖ್ಯ. ಇದೇ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ಅಮೂಲ್ಯ ಆಸ್ತಿ.
ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ಸೂತ್ರವನ್ನು ಇನ್ನಷ್ಟು ವಿಸ್ತರಿಸುತ್ತಾ ಕಶ್ಯಪರು ಹೀಗೂ ಹೇಳುತ್ತಾರೆ – ಮಾನವ ಜನ್ಮದ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಂಡು ಹೆಣ್ಣಾಗಲಿ ಗಂಡಾಗಲಿ 🌟 ಪುರುಷಾರ್ಥ ಪಾಲನೆಯ ಜೊತೆಗೆ ಮೂರು ಕರ್ಮದ ಋಣಗಳನ್ನು ಈ ಶ್ರೇಷ್ಠ ಜನ್ಮದಲ್ಲಿ ತೀರಿಸಲೇ ಬೇಕು. 🌟
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies