🙏ಓಂ ಜೈ ಮಾತಾ ಓಂ ಜೈ ಗುರುದೇವ🙏
🌸ಕಶ್ಯಪ ಸೂತ್ರಗಳು🌸
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏
🌸ಕಶ್ಯಪ ಸೂತ್ರ – 3🌸
🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹
ಅದೇ ರೀತಿ ‘ನಿನ್ನೆ’ ಎನ್ನುವುದು ಗತವಾಗಿ ಹೋಗಿದೆ. ಆದ್ದರಿಂದ ಅದರ ಚಿಂತೆ ಮಾಡಿಯೂ ಪ್ರಯೋಜನವಿಲ್ಲ. ಆದ್ದರಿಂದ ಮೃತ್ಯುವನ್ನು ಗೆಲ್ಲಲು ಮಾಡಬೇಕಾದ ಮೊಟ್ಟ ಮೊದಲ ಕೆಲಸ – ನಿನ್ನೆ, ನಾಳೆ ಎರಡರ ಚಿಂತೆ ಬಿಡಬೇಕು. ಭೂತ ಮತ್ತು ಭವಿಷ್ಯತ್ ಗಳನ್ನು ಬಿಟ್ಟು ವರ್ತಮಾನದಲ್ಲಿ ಬದುಕುವುದೇ ಮೃತ್ಯುವನ್ನು ಗೆಲ್ಲುವ ಮಾರ್ಗ. ಈ ಅರಿವು ನಮ್ಮಲ್ಲಿ ಸದಾ ಇರುವುದೇ ಶ್ರೇಷ್ಠವಾದ ಜ್ಞಾನ. ಇಂದಿನ ದಿನ ನಾನು ನನ್ನ ಹಣಬಲ, ಜನಬಲ, ವಿದ್ಯಾ ಶಕ್ತಿ, ಬುದ್ಧಿ ಶಕ್ತಿ, ಸಾಮರ್ಥ್ಯಗಳನ್ನು ಬಳಸಿಕೊಂಡು ಏನು ಸಾಧಿಸಬಲ್ಲೆ ಎಂಬ ಒಂದೇ ಧ್ಯೇಯ ನಮ್ಮಲ್ಲಿರಬೇಕು. ನನ್ನ ಆತ್ಮ ಬಲ, ದೇಹ ಬಲದಿಂದ ಏನನ್ನಾದರೂ ಇಂದು ಸಾಧಿಸುವೆ ಎಂಬ ಛಲ, ಅರಿವು ನಮ್ಮಲ್ಲಿ ಸದಾ ಮಿಡಿಯುತ್ತಿರಬೇಕು. ಈ ರೀತಿ ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಒಂದೇ ನಿಟ್ಟಿನಲ್ಲಿ ಬಳಸಿಕೊಂಡು ಮಾಡುವ ಎಲ್ಲ ಕೆಲಸಗಳು ಉನ್ನತವಾಗಿರುತ್ತವೆ. ದಿನ ನಿತ್ಯವೂ ನಾವು ಈ ದಿನ, ಈ ಕ್ಷಣದಲ್ಲಿ ಬದುಕುವ ಅಭ್ಯಾಸ ಮಾಡಬೇಕು. ಹೀಗೆ ಮಾಡುತ್ತಾ ಬಂದಾಗ ಅದೇ ನಮ್ಮ ಸಹಜ ಸ್ವಭಾವವಾಗಿ ಮಾರ್ಪಾಡಾಗುತ್ತದೆ.
ಆದರೆ ಹುಲುಮಾನವರಾದ ನಮಗೆ ಅಭ್ಯಾಸವಾಗಿರುವುದು ನಿನ್ನೆ ಮತ್ತು ನಾಳೆಯ ಯೋಚನೆಯಲ್ಲಿ ಮುಳುಗಿ ಕರ್ಮಫಲಗಳನ್ನು ಹೆಚ್ಚಿಸಿಕೊಳ್ಳುವುದು. ಕರ್ಮಫಲವೆಂದರೆ ಕೇವಲ ಮಾಡಿದ ಕೆಲಸಕ್ಕೆ ಫಲವೆಂದಲ್ಲ, ಪ್ರತಿಯೊಂದು ಯೋಚನೆಗೂ ಕೂಡ ಒಂದು ಪ್ರತಿಫಲವಿರುತ್ತದೆ. ಒಂದು ಯೋಚನೆ ಮತ್ತೊಂದು ಯೋಚನೆಗೆ ನಾಂದಿಯಾಗುತ್ತದೆ. ಒಂದು ಕ್ರಿಯೆ, ಮತ್ತೊಂದು ಕ್ರಿಯೆಗೆ ಎಡೆಮಾಡಿಕೊಡುತ್ತದೆ.
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies