🙏ಓಂ ಜೈ ಮಾತಾ ಓಂ ಜೈ ಗುರುದೇವ🙏
🌸ಕಶ್ಯಪ ಸೂತ್ರಗಳು🌸
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏
🌸ಕಶ್ಯಪ ಸೂತ್ರ – 3🌸
🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹
ಮಾನಸಿಕ ಒತ್ತಡ, ತೊಂದರೆಗಳು, ಚಿಂತೆಗಳು, ಯೋಚನೆಗಳು ಮನುಷ್ಯನ ನೆಮ್ಮದಿಯನ್ನು ಒಂದು ಸಲ ಕೊಲ್ಲುವುದಿಲ್ಲ ಪದೇ ಪದೇ ಕೊಲ್ಲುತ್ತವೆ. ಹೀಗಾಗಿ ಆತ್ಮದ ಗುಣವಾದ ಪರಮಾನಂದವನ್ನು ನಾವು ಯಾರೂ ಅನುಭವಿಸಿಯೇ ಇಲ್ಲ. ಆ ಸಾವನ್ನು ಮಾತ್ರ ಸಾಕಷ್ಟು ಅನುಭವಿಸಿದ್ದೇವೆ. ಆದ್ದರಿಂದ ‘ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ’ ಎಂದು ಕಶ್ಯಪರು ಹೇಳಿರುವಂತೆ ಆಗುವ ಮಾರ್ಗವೆಂದರೆ ಆ ಪರಮಾನಂದ ಎನ್ನುವ ಆತ್ಮದ ಗುಣವನ್ನು ಕೊಲ್ಲದಿರುವಂತಹ ಕರ್ಮದ ಫಲಗಳನ್ನು ನಾವು ಹೊಂದಬೇಕು. ಆ ಮೃತ್ಯುವನ್ನು ನಾವು ಗೆಲ್ಲಬೇಕು. ಇದಾಗಬೇಕಾದರೆ ನಮ್ಮಲ್ಲಿ ಒಂದು ಹೊಸ ಜ್ಞಾನ ಮೂಡಿಬರಬೇಕು. ಆ ಜ್ಞಾನವು ವಿಶೇಷವೇನಲ್ಲ – ನಮ್ಮಲ್ಲೇ ಅಡಗಿರುವಂತಹದು. ಆದರೆ ಅದರ ಅರಿವು ನಮಗಿಲ್ಲ ಅಷ್ಟೆ. ಆ ಜ್ಞಾನದ ಅರಿವು ನಮ್ಮಲ್ಲಿ ಸದಾ ಇರಬೇಕು.
ಈ ಅರಿವನ್ನು ಪಡೆದುಕೊಳ್ಳುವ ಏಕೈಕ ಮಾರ್ಗ – ಭೂತ, ಭವಿಷ್ಯತ್ತನ್ನು ಬಿಟ್ಟು ವರ್ತಮಾನದಲ್ಲಿ ಬದುಕುವುದು. ನಿನ್ನೆ, ನಾಳೆ ಎಂಬುದರ ಚಿಂತೆ ಬಿಟ್ಟು ಮನಸ್ಸನ್ನು ‘ಈ ಕ್ಷಣ’ ಎಂಬುದರಲ್ಲಿ ಸ್ಥಾಪಿಸುವುದು. ನಮ್ಮ ಅಂತರಾಳದಲ್ಲಿ ‘ನಾಳೆ’ ಎಂಬ ಭವಿಷ್ಯದ ಮೇಲೆ ಅಪಾರ ನಂಬಿಕೆ ಇದೆ. ದೇಹಕ್ಕೆ ಮೃತ್ಯುವಿಲ್ಲದಿದ್ದಲ್ಲಿ ‘ನಾಳೆ’ ಎಂಬುದನ್ನು ನೋಡುವುದು ಖಚಿತ. ರಾತ್ರಿ ಮಲಗಿದಾಗ ನಾಳೆ ಎದ್ದೇ ಏಳುತ್ತೇನೆ ಎಂಬ ಭರವಸೆ ನಮ್ಮಲ್ಲಿದೆ. ‘ನಾಳೆ’ ಎಂಬುದು ನಿಶ್ಚಿತವಾದಾಗ ಅದರ ಚಿಂತೆ ಇರಬಾರದು.
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies