?ಓಂ ಜೈ ಮಾತಾ ಓಂ ಜೈ ಗುರುದೇವ?
?ಕಶ್ಯಪ ಸೂತ್ರಗಳು?
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ?
?ಕಶ್ಯಪ ಸೂತ್ರ – 3?
? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ?
ಒಳ್ಳೆಯ ಚಿಂತನೆಯಿಂದ ಒಳ್ಳೆಯ ಚಿಂತನೆಗಳು, ಕೆಟ್ಟ ಯೋಚನೆಗಳಿಂದ ಮತ್ತಷ್ಟು ಕೆಟ್ಟ ಯೋಚನೆಗಳು – ಹೀಗೆ ಸುಖ,ದುಃಖಗಳನ್ನು ನಾವೇ ಆಹ್ವಾನಿಸುತ್ತೇವೆ. ಕಶ್ಯಪರು ಹೇಳುವಂತೆ – ಮಾನವ ದುಃಖವನ್ನು ನಿರಾಕರಿಸಿ ಸುಖವನ್ನು ಸ್ವೀಕರಿಸಿದರೆ ಸಾಲದು. ಸುಖ ದುಃಖಗಳೆರಡನ್ನೂ ದಾಟುವುದೇ ಮಾನವ ಧರ್ಮ. ಸುಖ ದುಃಖ ಎರಡನ್ನೂ ಗೆಲ್ಲುವಂತಹ ಮನಸ್ಸನ್ನು ಬೆಳೆಸಿಕೊಂಡರೆ ಮಾತ್ರ ಅವನು ಮೃತ್ಯುವನ್ನು ಗೆಲ್ಲಲು ಸಾಧ್ಯ.
ಈ ಮಾತನ್ನು ಕಶ್ಯಪರು ಆದಿಪರಾಶಕ್ತಿಯ ಪ್ರೇರಣೆಯಿಂದ, ಸತತವಾದ ಮನನದಿಂದ ಹೇಳಿರುತ್ತಾರೆ. ಹೀಗಾದರೆ ಮಾತ್ರ ನಾವು ಪರಮಾನಂದವನ್ನು ಕಾಣಬಹುದು, ಅನುಭವಿಸಬಹುದು, ಇಚ್ಛಾಮರಣಿಯಾಗಬಹುದು ಎಂದು ಅವರು ದೃಢವಾಗಿ ನುಡಿದಿದ್ದಾರೆ.
?ಆ ಮಾತೆಯು ನಮ್ಮ ಜೊತೆ ಮೊಟ್ಟ ಮೊದಲು ಕೊಟ್ಟು ಕಳುಹಿಸಿದ್ದೇ ಮೃತ್ಯು. ಆದರೆ ಅದರೊಂದಿಗೇ ಅದನ್ನು ಗೆಲ್ಲುವ ಸಾಮರ್ಥ್ಯವನ್ನು ಕೂಡ ನಮಗೆ ಕೊಟ್ಟಿದ್ದಾಳೆ.? ನಮ್ಮ ಕರ್ಮಫಲಕ್ಕೆ ಅನುಸಾರವಾಗಿ ನಾವು ಈ ಸಾಮರ್ಥ್ಯವನ್ನು ಹೊಂದಿರುತ್ತೇವೆ. ನಮ್ಮ ಮನಃಶಕ್ತಿ, ಸಂಕಲ್ಪಶಕ್ತಿಗಳಿಂದ ನಾವು ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಬಾಲಕೃಷ್ಣನು ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನ ಮೇಲೆ ನಿಲ್ಲಿಸಿದ ಹಾಗೆ, ಆಂಜನೇಯನು ಶ್ರದ್ಧಾಭಕ್ತಿಗಳಿಂದ ಶ್ರೀ ರಾಮನನ್ನು ತನ್ನ ಹೃದಯದಲ್ಲಿ ಸ್ಥಾಪಿಸಿ ಸಂಜೀವಿನಿ ಪರ್ವತವನ್ನೇ ಎತ್ತಿದ ಹಾಗೆ,
?ದೇವತಾ ಶಕ್ತಿಯನ್ನು ದೃಢವಾಗಿ ನಮ್ಮಲ್ಲಿ ಸ್ಥಾಪಿಸಿಕೊಂಡರೆ ಏನನ್ನಾದರೂ ಸಾಧಿಸಬಹುದು.?
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies