?ಓಂ ಜೈ ಮಾತಾ ಓಂ ಜೈ ಗುರುದೇವ?
?ಕಶ್ಯಪ ಸೂತ್ರಗಳು?
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ?
?ಕಶ್ಯಪ ಸೂತ್ರ – 4?
? ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ ?
ಕಶ್ಯಪರು ‘ ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ ‘ ಎಂಬ ನಾಲ್ಕನೆಯ ಸೂತ್ರದಲ್ಲಿ, ಮನುಷ್ಯನಿಗೆ ಜೀವನದ ಧರ್ಮದ ರೀತಿ ನೀತಿಗಳನ್ನು ಮೂರು ಶಬ್ದಗಳಲ್ಲಿ ಬೋಧಿಸುತ್ತಾರೆ. ಯಾವ ರೀತಿ ಮನುಷ್ಯ ತನ್ನ ತನು, ಮನ, ಧನ ಹಾಗೂ ಇಚ್ಛಾ, ಕ್ರಿಯಾ ಮತ್ತು ಜ್ಞಾನ ಶಕ್ತಿಗಳನ್ನು ಸದುಪಯೋಗ ಮಾಡಿಕೊಂಡು ದೇವರ ಕೃಪೆಗೆ ಪಾತ್ರನಾಗಬಹುದು ಎಂದು ತಿಳಿಯ ಪಡಿಸುತ್ತಾರೆ.
‘ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ’ – ಕಾಮ ಎಂದರೆ ಆಸೆಗಳು. ಆರಾಧನೆ ಎಂದರೆ ಇಚ್ಛಾ, ಕ್ರಿಯಾ, ಬುದ್ಧಿ ಶಕ್ತಿಗಳನ್ನು ಒಂದೇ ನಿಟ್ಟಿನಲ್ಲಿ ತೊಡಗಿಸುವುದು. ಕಾಮಾರಾಧನೆ ಅಂದರೆ ದೇವತಾರಾಧನೆಯನ್ನು ಮರೆತು ಆಸೆಗಳ ಆರಾಧನೆಯಲ್ಲಿ ಮುಳುಗಿರುವುದು ಎಂದು.
ವಿದ್ಯೆ ಎಂದರೆ ಜ್ಞಾನ, ಅವಿದ್ಯಾ ಅಂದರೆ ಅಜ್ಞಾನ. ‘ವಿದ್ಯಾವಿದ್ಯಾ ಫಲಿತಂ’ ಎನ್ನುವುದರ ಅರ್ಥ ಮನುಷ್ಯ ತನ್ನ ಕಾಮಾರಾಧನೆಯಿಂದ ಜ್ಞಾನ, ಅಜ್ಞಾನ ಎರಡೂ ಫಲಗಳನ್ನು ಪಡೆಯುತ್ತಾನೆ. ಅಷ್ಟೇ ಅಲ್ಲ ತನ್ನ ಕರ್ಮಗಳಿಂದ ಇನ್ನೂ ಹೆಚ್ಚು ಹೆಚ್ಚು ಕರ್ಮಗಳನ್ನು ಸೃಷ್ಟಿಸಿಕೊಂಡು ಅದರ ಫಲಗಳನ್ನು ಅನುಭವಿಸುತ್ತಾನೆ. ಜ್ಞಾನ, ಅಜ್ಞಾನ ಎರಡನ್ನೂ ಗಳಿಸುತ್ತಾ ಕಾಲ ಕಳೆಯುತ್ತಾನೆ. ತ್ರಿಕಾಲಜ್ಞಾನಿಯಾದ ಕಶ್ಯಪರು ಹೇಳುವುದೇನೆಂದರೆ
? ಕಾಮರಾಧನೆಯಿಂದ ವಿದ್ಯೆ, ಅವಿದ್ಯೆ ಪಡೆಯುವ ಕರ್ಮಗಳನ್ನು ಬಿಟ್ಟು ದೇವರ ಕೃಪೆ ಸಂಪಾದನೆ ಮಾಡುವುದೇ ಮಾನವಧರ್ಮ ಎಂದು. ಮನುಷ್ಯನ ಗುರಿಯೇ ಅದಾಗಿರಬೇಕು. ? ಅವನನ್ನು ಆತ್ಮದ ಕಡೆಗೆ ಕೊಂಡೊಯ್ಯುವಂತಹ ಆಸೆಗಳು ಅವನದಾಗಿರಬೇಕು. ದೇವರ ಕೃಪೆ ಅವನ ದಿಕ್ಕಿನಲ್ಲಿ ಹರಿಯುವಂತೆ ಮಾಡುವ ಧ್ಯೇಯವನ್ನು ಮಾನವ ಸದಾ ಹಮ್ಮಿಕೊಳ್ಳಬೇಕು.
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies