🙏ಓಂ ಜೈ ಮಾತಾ ಓಂ ಜೈ ಗುರುದೇವ🙏
🌸ಕಶ್ಯಪ ಸೂತ್ರಗಳು🌸
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏
🌸ಕಶ್ಯಪ ಸೂತ್ರ – 3🌸
🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹
ಈ ಮೃತ್ಯುವನ್ನೇ ಗೆಲ್ಲಬೇಕು ಎನ್ನುತ್ತಾರೆ ಕಶ್ಯಪರು. 🌟ಜನ್ಮದ ಶ್ರೇಷ್ಠತ್ವವೇ ಈ ಮೃತ್ಯುವನ್ನು ಗೆಲ್ಲುವುದು ಅಂದರೆ ಆತ್ಮವನ್ನು ಜನ್ಮಗಳ ಬಂಧನಕ್ಕೆ ಸಿಲುಕದ ಹಾಗೆ ಮಾಡುವುದು.🌟 ಆಸೆಗಳಿಂದ ಮತ್ತೆ ಮತ್ತೆ ಜನ್ಮ ಪಡೆಯುತ್ತಾ ಇರುವ ನಮಗೆ ಆರನೆಯ ಅಥವಾ ಏಳನೆಯ ಮಾನವ ಜನ್ಮದಲ್ಲಿ ಗುರುಗಳೊಬ್ಬರು ಸಿಗುತ್ತಾರೆ. ಪ್ರತ್ಯಕ್ಷ ದೇವರಾದ ಗುರುಗಳು ನಮಗೆ ವೇದಶಾಸ್ರ್ತ, ಉಪನಿಷತ್, ರೀತಿ ನೀತಿ, ಧರ್ಮ, ಜೀವನದ ಮಾರ್ಗದರ್ಶನದೊಂದಿಗೆ ಆತ್ಮ ಸಾಧನೆಯ ಮಾರ್ಗವನ್ನು ತೋರಿಸಿ ಕೊಡುತ್ತಾರೆ. ಸಾಧನೆಯೊಂದಿಗೆ ಆತ್ಮ ಸಮರ್ಪಣಾ ಮನೋಭಾವದಿಂದ ಗುರುಗಳ ಸೇವೆ ಮಾಡುತ್ತಾ ಬಂದಾಗ ಏಳನೆಯ ಜನ್ಮದಲ್ಲಿ ನಮಗೆ ಮುಕ್ತಿ ಹೆಚ್ಚಿನಂಶ ಲಭಿಸುತ್ತದೆ. ಗುರುಸೇವೆಯಿಂದ ಮಾತ್ರ ನಮ್ಮೊಳಗಿರುವ ಅಹಂಕಾರದ ನಾಶ ಸಾಧ್ಯ. ಈ ಅಹಂಕಾರ ನಾಶವಾದಾಗ ಮಾತ್ರ ನಮ್ಮ ಮನಸ್ಸು, ಬುದ್ಧಿಗಳ ವಿಕಾಸ ಸಾಧ್ಯ. ಇದಾದಾಗಲೇ ನಮಗೆ ಆತ್ಮದ ಆನಂದ, ನೆಮ್ಮದಿ ಹಾಗೂ ಆಧ್ಯಾತ್ಮಿಕ ಅನುಭವಗಳು ಪ್ರಾರಂಭವಾಗುವುದು. ಆಧ್ಯಾತ್ಮಿಕ ಅನುಭವವನ್ನು ಮುಮುಕ್ಷತ್ವದ ಅನುಭವ ಎಂದೂ ಹೇಳುತ್ತಾರೆ. ಇಷ್ಟಾದಾಗ ದೇವರ ಪರೋಕ್ಷ ಅನುಭವ ಕೂಡ ನಮಗೆ ಆರಂಭವಾಗುವುದು. ಮನಸ್ಸು, ಬುದ್ಧಿ ವಿಕಾಸವಾಗಿ ಅವುಗಳ ಬಂಧನದಿಂದ ನಾವು ಹೊರಬಂದಾಗ ನಮ್ಮ ಜನ್ಮದ ಶ್ರೇಷ್ಠತೆಯ ಅರ್ಥ ನಮಗೆ ತಿಳಿಯುವುದು. 🌟 ಆತ್ಮ ಸಾಕ್ಷಾತ್ಕಾರದತ್ತ, ಪರಮಾನಂದ ಸ್ಥಿತಿಯನ್ನು ಹೊಂದುವತ್ತ ನಮ್ಮ ಮನಸ್ಸು ಚಲಿಸುವುದು. ಇದೇ ಮೃತ್ಯುಂಜಯ ಸ್ಥಿತಿ.🌟
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies