🙏ಓಂ ಜೈ ಮಾತಾ ಓಂ ಜೈ ಗುರುದೇವ🙏
🌸ಕಶ್ಯಪ ಸೂತ್ರಗಳು🌸
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏
🌸ಕಶ್ಯಪ ಸೂತ್ರ – 3🌸
🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹
ಈ ರೀತಿ ದೇವರ ಕೃಪೆ ಮತ್ತು ಪ್ರೇರಣೆಯಿಂದ ಧರ್ಮವು ನಮ್ಮಲ್ಲಿ ಸ್ಥಾಪನೆಯಾದ ಕ್ಷಣವೇ ಲಕ್ಷ್ಮಿಯು ನಮ್ಮಲ್ಲಿ ಮನೆ ಮಾಡುತ್ತಾಳೆ ಎಂದು ಕಶ್ಯಪರು ಹೇಳುತ್ತಾರೆ. ಲಕ್ಷ್ಮಿ ಎಂಬ ದೇವತಾ ಶಕ್ತಿಯು ಸುಖ ಶಾಂತಿಯ ಸಂಕೇತವಾಗಿದ್ದಾಳೆ. ಎಲ್ಲಿ ಸುಖ ಶಾಂತಿ ಇರುವುದೋ ಅಲ್ಲಿ ಲಕ್ಷ್ಮಿ ಖಂಡಿತವಾಗಿಯೂ ನೆಲೆಸಿರುತ್ತಾಳೆ ಎಂದರ್ಥ. ನಮ್ಮ ಇಚ್ಛಾ, ಕ್ರಿಯಾ, ಜ್ಞಾನ ಶಕ್ತಿಗಳಿಂದ ನಮ್ಮ ಚಿತ್ತ, ಬುದ್ಧಿಗಳನ್ನು ಸ್ಥಿಮಿತದಲ್ಲಿಟ್ಟು ಕೊಂಡರೆ ಮಾತ್ರ ಅಲ್ಲಿ ಲಕ್ಷ್ಮಿಯ ಪ್ರವೇಶವಾಗುತ್ತದೆ. ಆಗ ಮಾತ್ರ ನಮಗೆ ದೈವ ಪ್ರೇರಣೆಯಾಗಲು ಸಾಧ್ಯವಾಗುತ್ತದೆ. ಹೀಗೆ ಶಾಂತವಾದ ಮನಸ್ಸಿಗೆ ಪ್ರೇರಣೆಯಾದಂತಹ ಯೋಚನೆಗಳನ್ನು ಕಾರ್ಯರೂಪಕ್ಕೆ ತಂದಾಗ ಅದು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಅದಕ್ಕೆ ನಮ್ಮ ಮನಸ್ಸು ಗೊಂದಲದಲ್ಲಿದ್ದಾಗ ನಾವು ಏಕಾಂತದಲ್ಲಿರಲು ಬಯಸುತ್ತೇವೆ. ಮನಸ್ಸು ತಿಳಿಯಾಗಲು ಸ್ವಲ್ಪ ಸಮಯ ಬೇಕು ಎಂದು ಹೇಳುತ್ತೇವೆ. ಮನಸ್ಸು ತಿಳಿಯಾದಾಗ ಮಾತ್ರ ಜ್ಞಾನಶಕ್ತಿ ಬಂದು ನಮ್ಮ ಮನಸ್ಸಿಗೆ ಪರಿಹಾರವನ್ನು ಸೂಚಿಸುತ್ತದೆ ಮತ್ತು ಪ್ರೇರೇಪಿಸುತ್ತದೆ. ಈ ರೀತಿ ಆದಾಗಲೇ ಮೃತ್ಯುವನ್ನು ಗೆದ್ದಂತೆ.
ಮನುಷ್ಯ ತೀವ್ರವಾದ ಚಿಂತೆ ಮಾಡುವ ದುರಭ್ಯಾಸವನ್ನು ಬಿಡಬೇಕು. ಅದು ಅವನಿಗೆ ಹಾನಿಕಾರಕವಾಗಬಹುದು. ಇಂತಹ ಚಿಂತೆಗಳನ್ನು ತ್ಯಜಿಸಿ, ಆತ್ಮಗುಣಗಳಾದ ಸುಖ ಶಾಂತಿಗಳನ್ನು ವೃದ್ಧಿಸುವಂತಹ ಚಿಂತನೆಗಳಲ್ಲಿ ತೊಡಗಬೇಕು. ನಕಾರಾತ್ಮಕ ಭಾವನೆಗಳಿಗೆ ಒಳಗಾಗಬಾರದು.
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies